ರೋಣದ ಬಿ.ಆರ್.ಬಿ. ಬುಲ್ಸ್ ಜಯಭೇರಿ, ಶಾಸಕ ಜಿ.ಎಸ್.‌ಪಾಟೀಲರ ಕಾರ್ಯ ಶ್ಲಾಘನೀಯ

ರೋಣ: ರೋಣ ಪ್ರೊ ಕಬಡ್ಡಿಯನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಆಯೋಜಿರುವುದು ಹೆಮ್ಮೆಯ ವಿಷಯ. ಗ್ರಾಮೀಣ ಭಾಗದ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಿ, ಆಟಗಾರರನ್ನು ರಾಜ್ಯ, ರಾಷ್ಟ್ರಮಟ್ಟಕ್ಕೆ ಬೆಳೆಸುತ್ತಿರುವ ಶಾಸಕ ಜಿ.ಎಸ್. ಪಾಟೀಲ ಅವರ ಕಾರ್ಯ ಶ್ಲಾಘನೀಯ ಎಂದು ಯೂಥ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ ಗೌಡ ಹೇಳಿದರು.

ಪಟ್ಟಣದ ಸೇಲ್ ಸೊಸೈಟಿ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ರೋಣ ಪ್ರೊ. ಕಬಡ್ಡಿ ಫೈನಲ್ ಪಂದ್ಯದ ಉದ್ಘಾಟನಾ ಕಾರ್ಯಕ್ರಮ ನೆರವೇರಿಸಿ ಮಾತನಾಡಿದರು.

ರಾಷ್ಟ್ರೀಯ ಕಾರ್ಯದರ್ಶಿ ಅವರು ಪಧಾನ ನಿಗಮ್ ಬಂಡಾರಿ ಮಾತನಾಡಿ, ಕಬಡ್ಡಿ ಸರ್ಧೆ ಗ್ರಾಮೀಣ ಸೊಗಡು ಬಿಂಬಿಸುವ ಆಟ. ಕಬಡ್ಡಿ ಕ್ರೀಡೆ-ಯು ಆಟಗಾರಿಗೆ ದೈಹಿಕ ಶಕ್ತಿ ಬೆಳೆಯಲು ಸಹಾಯಕವಾಗುವ ಜತೆಗೆ ಚತುರತೆ ಬೆಳೆಸುತ್ತದೆ. ಕಬಡ್ಡಿ ಆಟದ ವೇಳೆ ಶ್ರಮಿಸಿದ ಮೈಯಿಗೆ ಮಣ್ಣಿನ ಗುಣ ಆಂಟಿ-ಕೊಂಡರೆ ಆರೋಗ್ಯದಿಂದ ಇರಬಹುದು ಎಂದರು. ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಪ್ರಸ್ತುತ ಯುವ ಸಮುದಾಯ ಕ್ರಿಕೆಟ್, ಮೊಬೈಲ್ ಗೇಮ್ ಗಳ ಮಧ್ಯೆ ಕಾಲ ಕಳೆಯುತ್ತಿದೆ. ಗ್ರಾಮೀಣ ಕ್ರೀಡೆಗಳು ಕ್ರಮೇಣ ಮರೆಮಾಚುತ್ತಿವೆ. ಇವುಗಳನ್ನು ಪೋಷಿಸುವ ಕೆಲಸವಾಗಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಉತ್ಸಾಹ ಬಹುಮುಖ್ಯವಾಗಿದೆ. ಕಬಡ್ಡಿ, ಖೋ-ಖೋ ಸೇರಿ ಹತ್ತಾರು ಆಟಗಳನ್ನು ಆಡುವುದರಿಂದ ದೈಹಿಕವಾಗಿ ಸದೃಢರಾಗುವ ಜತೆಗೆ ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ

ಬಿ.ಆ‌ರ್.ಬಿ. ಬುಲ್ಸ್ ಜಯಭೇರಿ: ನಾಲ್ಕು ದಿನಗಳ ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ರೋಣದ ಬಿಆರ್‌ಬಿ ಬುಲ್ ತಂಡ ಜಯಭೇರಿಯೊಂದಿಗೆ ಮೊದಲ ಬಹುಮಾನ 50 ಸಾವಿರ ನಗದು ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಇನ್ನು ರನ್ನರ್ ಅಪ್ ಪ್ರಶಸ್ತಿಯನ್ನು ಎಂಜಿಪಿ ವಾರಿಯರ್ಸ್ ತಂಡ ಪಡೆದುಕೊಂಡು ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಸ್ಪೂರ್ತಿ ಬಾಯ್ಸ್ ರೋಣ ಮೂರನೇ ಸ್ಥಾನ ಪಡೆದುಕೊಂಡರೆ, 4ನೇ ಸ್ಥಾನವನ್ನು ರಾಣಿ ಚನ್ನಮ್ಮ ಬಾಯ್ಸ್ ರೋಣ ಪಡೆದುಕೊಂಡಿತು.

ಗದಗ ಜಿಲ್ಲಾ ಮಹಿಳಾ ತಂಡಕ್ಕೆ ಪ್ರಶಸ್ತಿ: ಮಹಿಳಾ ವಿಭಾಗದಲ್ಲಿ ಗದಗ ಜಿಲ್ಲಾ ತಂಡ ಮೊದಲ ಬಹುಮಾನ ಪಡೆದುಕೊಂಡರೆ, ಹಾವೇರಿಯ ದುರ್ಗಾಶಕ್ತಿ ತಂಡ ಎರಡನೇ ಬಹುಮಾನ ಪಡೆದುಕೊಂಡಿತು. ಕಾಡರಕೊಪ್ಪದ ಸದಾಶಿವ ತಂಡ ಮೂರನೇ ಬಹುಮಾನ ಪಡೆದುಕೊಂಡರೆ, ತೊಳಮಟ್ಟಿಯ ಮಲ್ಲಿಕಾರ್ಜುನ ಮಹಿಳಾ ತಂಡ ನಾಲ್ಕನೇ ಬಹುಮಾನ ಪಡೆದುಕೊಂಡಿತು.

ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚು ಒತ್ತು ನೀಡುವ ಕೆಲಸ ಮಾಡಬೇಕು ಎಂದರು. ಐ.ಎಸ್. ಪಾಟೀಲ, ರೋಣ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ, ಶಶಿಕಲಾ ಪಾಟೀಲ, ಯುವ ಸಮಿತಿ ಜಿಲ್ಲಾಧ್ಯಕ್ಷ ಕೃಷ್ಣಗೌಡ ಪಾಟೀಲ, ವಿವೇಕ ಯಾವಗಲ್ಲ, ಅಕ್ಷಯ್ ಪಾಟೀಲ, ವೀರಣ್ಣ ಶೆಟ್ಟರ್, ಪರಶುರಾಮ ಅಳಗವಾಡಿ. ಸಿದ್ದು ಪಾಟೀಲ, ಅಶೋಕ ಮಂದಾಲಿ, ವಿ.ಬಿ. ಸೋಮನಕಟ್ಟಿಮಠ, ಮುತ್ತಣ್ಣಿ ಸಂಗಳದ ಯೂಸೂಫ್ ಇಟಗಿ, ಪ್ರಭು ಮೇಟಿ, ಡಾ. ಕೆ.ಬಿ. ಧನ್ನೂರ. ಎಚ್.ಎಸ್. ಸೋಂಪುರ, ಬಾವಾಸಾಬ್ ಬೆಟಗೇರಿ, ಮುತ್ತುರಾಜ ನವಲಗುಂದ, ಮುರ್ತುಜಾ ಡಾಲಾಯತ್, ಅಭಿಷೇಕ ನವಲಗುಂದ. ಅಸ್ಲಾಂ ಕೊಪ್ಪಳ, ಗದಿಗೆಪ್ಪ ಕಿರೇಸೂರ, ಸಂಜಯ್ ದೊಡ್ಡಮನಿ, ಡಾ. ಸಂಜಯ್ ರಡ್ಡರ, ಅಪ್ಪು ಗಿರಡ್ಡಿ, ಅವಿನಾಶ ಸಾಲಿಮನಿ, ಸಂಗು ನವಲಗುಂದ, ಬಸವರಾಜ ಹೊಸಳ್ಳಿ, ಬಸವರಾಜ ನವಲಗುಂದ. ಶಮೀರ್ ಬೆಟಗೇರಿ, ಯಚ್ಚರಗೌಡ ಗೋವಿಂದಗೌಡ, ರಾಜು ಪಲ್ಲೇದ, ಈಶಪ್ಪ ಕಡಬಿನಕಟ್ಟಿ, ಮಲಿಕ್ ಯಲಿಗಾರ, ಮಹೇಶ ಕಳಸಣ್ಣವರ, ಸತೀಶ ಮಾಗಿ ಗೋಪಿ ರಾಯನಗೌಡ, ಇಸ್ಮಾಯಿಲ್ ಹೊರಪೇಟೆ, ಮುತ್ತು ಪ್ರಧಾನಿ, ಅಂದಪ್ಪ ಬಿಳ್ಳೂರ, ನಾಜ್ ಬೇಗಂ ಯಲಿಗಾರ, ರಾಜು ಸಾಂಗ್ಲಿಕರ, ಸೋಮು ನಾಗರಾಜ, ತೋಟಪ್ಪ ನವಲಗುಂದ. ಇನ್ನಿತರರು ಇದ್ದರು.